ಅಂಬೋಲಿಗೆ ಹೋಗಿ ತಿರುಗಿ ಬರುವಾರ ಹೀಗೆ ಅನಿಸದೇ ಇರದು. ಅಲ್ಲಿನ ನಿಸರ್ಗದ ರಮಣೀಯತೆ ಹಾಗಿದೆ. ಅಂಥದ್ದೊಂದು ಸ್ಥಳ ನೋಡಿ ಗೆಳೆಯ ಗಿರೀಶ ಎರಡು ಮಾತು ಹೇಳತ್ತಾನೆ. ೧) ಸಿಎ ರಿಸಲ್ಟ್ ಏರುಪೇರಾದರೆ ಇಲ್ಲಿಗೆ ಬರಬೇಕು. ೨) ಬದುಕಿನಲ್ಲಿ ಏನೂ ಇಲ್ಲ ಅಂದು ಕೊಂಡವರೂ ಇಲ್ಲಿಗೆ ಒಮ್ಮೆ ಬರಬೇಕು. ಆದರೆ, ಪ್ರಸಾದ ಹೇಳುವುದೇ ಬೇರೆ. ಅವನ ಪ್ರಕಾರ, ಆ ದೊಡ್ಡ ಹಸಿರು ಗುಡ್ಡದ ಅಂತಿಮ ತುದಿಯ ಮಣ್ಣಿನಲ್ಲಿ ಬೆಳೆದ ಕುಬ್ಜ ಗಿಡ. ಅದನ್ನು ನೋಡಿ ಇದು ಜಗತ್ತಿನ ಕೊನೆಯ ಗಿಡ ಎಂಬಂತೆ ಭಾವನೆ.
ಸುಮಾರು ೨೦ಕ್ಕೂ ಹೆಚ್ಚು ಜಲಪಾತಗಳ ಸರಣಿ. ಹಸಿರು ಗುಡ್ಡದ ಸಾಲು ಸಾಲು. ಮೈಗೆ ಮುತ್ತಿಕ್ಕಿ ಹಾರಿ ಹೋಗುವ ಮಂಜಿನ ಹೊಗೆ. ಮಳೆಯನ್ನೂ ಲೆಕ್ಕಿಸದೇ ಪ್ರಕೃತಿ ನೋಡುವ ತವಕ. ಅಂಥ ಒಂದು ಪರಿಸರ ಅದೆಷ್ಟು ಪುಳಕಿತವಾಗಿ ಮಾಡಿಬಿಡುತ್ತದೆ ಎಂದು ಮಾತಿನಲ್ಲಿ ಹೇಳಲಾಗದು......ಅಷ್ಟು.
ಸಮುದ್ರ ಮುಟ್ಟದಿಂದ ೨೩೪೦ ಅಡಿ ಎತ್ತರದ ಗಿರಿಗಳ ಸಾಲು. ಎಲ್ಲಿ ನೋಡಿದರೂ ಹಸಿರು. ಪಶ್ಚಿಮಘಟ್ಟ ಪ್ರದೇಶದಲ್ಲಿ ಬರುವ ಸಿಂಧುದುರ್ಗ ಎಂಬ ಆ ಪ್ರದೇಶ ಅದ್ಧುತ. ವರ್ಷಕ್ಕೆ ಸುಮಾರು ೫೦ ಸಾವಿರ ಜನ ಇಲ್ಲಿಗೆ ಭೇಟಿ ನೀಡುತ್ತಾರೆ. ವೀಕೆಂಡ್ಗೆ ಜನ ಜಾತ್ರೆ. ಸಾಯುವ ಮೊದಲು ನೋಡುವ ಪ್ರದೇಶಗಳಲ್ಲಿ ಇದೂ ಒಂದು ಎಂಬ ಪ್ರತೀತಿ. ಆದರೆ ಅಲ್ಲಿ ಮತ್ತೇನೂ ಇಲ್ಲ. ಇರುವುದು ಸುಂದರ ಪರಿಸರ ಮಾತ್ರ. ಮಳೆಗಾಲದಲ್ಲಿ ಅಂಬೋಲಿ ಘಟ್ಟ ಪ್ರದೇಶ ನೀರು, ಜನರಿಂದ ತುಂಬಿ ಹೋಗುತ್ತದೆ. ಹಚ್ಚ ಹಸಿರಿನ ಹೊದಿಕೆ ಎಲ್ಲೆಲ್ಲೂ ತೆರೆಯುತ್ತದೆ.
ಅಂಬೋಲಿ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ಇದೆ. ಬೆಳಗಾವಿಯಿಂದ ೯೦ ಕಿ.ಮಿ. ದೂರ. ಕಾರವಾರ ಅಲ್ಲಿಂದ ಸಾವಂತವಾಡಿ ಮೂಲಕವೂ(ಎನ್ಎಚ್ ೧೭) ಅಂಬೋಲಿ ತಲುಪಬಹುದು. ಮಳೆಗಾಲದ ಭೇಟಿಯೇ ಹೆಚ್ಚು ರೋಮಾಂಚನ ನೀಡುವ ಕಾಲ. ಅಂಬೋಲಿಯಲ್ಲಿ ನೋಡುವ, ಇನ್ನೂ ಹುಡುಕುವ ಸ್ಥಳವೂ ಇದೆ. ಕಾಡು, ಬೆಟ್ಟ ಸುತ್ತುವವರಿಗೆ ಇಂಥದ್ದೊಂದು ಸ್ಥಳ ತೀರಾ ಆಪ್ಯಾಯ.

6 comments:
ಮಾಯಾನಗರಿ! ಅದ್ಭುತ ಫೋಟೋಗಳು.
ಇಂದು ನಿಮ್ಮ ಬ್ಲಾಗನ್ನು ನೋಡಿದೆ. ಚಿತ್ರಗಳು ಸೂಪರ್!!
ಫೋಟೋಗಳು ಚೆನ್ನಾಗಿವೆ.
ಅಂಬೋಲಿ ಬಗ್ಗೆ ತಿಳಿದಿರಲಿಲ್ಲ ಈ ವರೆಗೆ.
ಆದರು ಅಂತಹ ಜಾಗಗಳಲ್ಲಿ ಆ ತರಹ ಜನಜಂಗುಳಿಯಿದ್ದರೆ ಚೆನ್ನಾಗಿರುವುದಿಲ್ಲ.
ಅಂಬೋಲಿ ನೈಸರ್ಗ್ಕಿಕ ಗುಟ್ಟನ್ನ ರಟ್ಟು ಮಾಡಿದಕ್ಕೆ ಧನ್ಯವಾದಗಳು..... ನಿಜಕ್ಕೂ great work. ನನ್ನ ಹೆಂಡತಿ ಗೆ ಅದನ್ನ ತೋರಿಸೋದು ಅನಿವಾರ್ಯವಾಯಿತು....!! Thanks.

mindblowing photos... thanks for such nice photos
Post a Comment