ಮೇ ತಿಂಗಳಲ್ಲಿ ಗೋಕಾಕ ಫಾಲ್ಸ್‌ಗೆ ಹೋದಾಗ ನೀರು ಅತಿ ಕನಿಷ್ಠ ಪ್ರಮಾಣದಲ್ಲಿ ಹರಿಯುತ್ತಿತ್ತು. ಮುಂಗಾರು ಮಳೆಯಲ್ಲಿ ಗಣೇಶ ಜಲಪಾತದ ತುದಿಗೆ ಹೋದಹಾಗೆ ನಾವೂ ಗೋಕಾಕ ಫಾಲ್ಸ್‌ನ ಶಿಲೆಯ ತುದಿಗೆ ಅಥವಾ ನೀರು ಕೆಳಕ್ಕೆ ಬೀಳುವ ತುದಿಗೆ ಹೋಗಿ ಕೂಹೂ...ಹೂ.. ಎಂದಿದ್ದೆವು.
ಆಗಸ್ಟ್‌ನಲ್ಲಿ ಹೋದಾಗ ಅಲ್ಲಿನ ಚಿತ್ರಣವೇ ಬೇರೆ. ೧೭೭ ಮೀ. ಅಗಲಕ್ಕೆ ನೀರು ಹರಿಯುತ್ತಿತ್ತು. ರಭಸವಾಗಿ. ಮೇ ತಿಂಗಳ ಅಂತ್ಯಕ್ಕೂ ಆಗಸ್ಟ್‌ನ ಭೇಟಿಗೂ ಇರುವ ಮಜವೇ ಬೇರೆ. ಜಲಪಾತದ ಅಗಲ ಅಥವಾ ನೀರು ಹರಿಯುವ ಕ್ಷೇತ್ರ ೧೭೭ ಮೀಟರ್. ನೀರು ಕೆಳಕ್ಕೆ ಧುಮುಕುವುದು ಕೇವಲ ೫೨ ಮೀಟರ್ ಎತ್ತರದಿಂದ ಅಷ್ಟೆ. ಹರಡಿ ಹರಡಿ ವಿಶಾಲವಾಗಿ ನೀರು ಬೀಳುತ್ತದೆ. ಆದರೆ ಎತ್ತರ ಕಡಿಮೆ. ಅದಕ್ಕೇ ಅದನ್ನು ಕರ್ನಾಟಕದ ನಯಾಗರ ಎನ್ನುವುದು.
ಘಟಪ್ರಭಾ ನದಿಯ ಈ ಜಲಪಾತದ ಅಕ್ಕ ಪಕ್ಕದ ಊರಿಗೆ ಸಂಪರ್ಕ ಕಲ್ಪಿಸಲು ತೂಗು ಸೇತುವೆ ಇದೆ. ತೂಗು ಸೇತುವೆಯ ಕಿರು ನಡಿಗೆ ಅದ್ಭುತ ಅನುಭವ. ಮೊದಲೇ ಅದು ತೂಗುವ ಸೇತುವೆ. ಕೆಳಗೆ ರಭಸವಾಗಿ ಹರಿಯುತ್ತಿರುವ ನೀರು ನೀರು. ಒಂದು ಮಗ್ಗುಲಿನಲ್ಲಿ ಮುನ್ನುಗ್ಗಿ ಬರುವ ನೀರಿನ ಹರಿವು. ಇನ್ನೊಂದು ಪಕ್ಕ ಧುಮಕುವ ನೀರಿನ ಪ್ರಪಾತ. ಗಾಳಿ- ಜನರ ಓಡಾಟಕ್ಕೆ ಅಲ್ಲಾಡುವ ಸೇತುವೆ. ಎಷ್ಟು ಜಲಪಾತ ನೋಡಿದರೂ ಅಂಥ ತೂಗು ಸೇತುವೆ ನಡಿಗೆ ಅನುಭವ ಭಾರೀ ಅಪರೂಪವೇ. ತೂಗು ಸೇತುವೆ ಉದ್ದ ೨೧೦ ಮೀ.
ಅಂದಹಾಗೆ ಗೋಕಾಕ ಫಾಲ್ಸ್‌ನಲ್ಲಿ ೧೮೮೭ರಿಂದಲೇ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಇದು ದೇಶದಲ್ಲೇ ಮೊದಲು. ಗೋಕಾಕದದ ಬಳಿ ಗೊಡಚಿನ ಮಲ್ಕಿ ಎಂಬ ಇನ್ನೊಂದು ಸುಂದರ ಜಲಪಾತವಿದೆ. ಗೋಕಾಕ ಕರದಂಟು, ಗೋಕಾಕ್ ಮಿಲ್‌ನ ಬಟ್ಟೆಗೂ ಪ್ರಸಿದ್ಧ.

2 comments:
ಫೋಟೋ ಚೆನ್ನಾಗಿದ್ದು....
ಗೊಡಚಿನ ಮಲ್ಕಿ?? ಯಾವುದಿದು? photos please....
ಥ್ಯಾಂಕ್ಸ್,
ಗೊಡಚಿನ ಮಲ್ಕಿಗೆ ಇನ್ನು
ಹೋಗಿಲ್ಲ. ನಾನು ಕೂಡ
ಫೋಟೋ ಮಾತ್ರ ನೋಡಿದ್ದು.
Post a Comment