ಹುತ್ತದಲ್ಲಿ ಅಣಬೆ ನೋಡಿದ್ದೀರಾ? ಸಿನೇಮಾಗಳಲ್ಲಿ ಹುತ್ತದಿಂದ ಹಾವು ಬರುವುದು ಗೊತ್ತು , ಇನ್ನು ಹುತ್ತದಲ್ಲಿ ಗೆದ್ದಲು ನೋಡಿದ್ದೇವೆ. ಆದರೆ ಅಣಬೆ?ಹುತ್ತದ ಅಣಬೆ ರುಚಿಗೆ ನಾಲಿಗೆ ಎಷ್ಟು ಮರುಳಾಗಿದೆ ಎಂದರೆ, ಧಾರವಾಡದ ಕೃಷಿ ವಿಶ್ವ ವಿದ್ಯಾಲಯ ಸೇರಿದಂತೆ ದೇಶ, ವಿದೇಶದ ಹಲವು ವಿಶ್ವ ವಿದ್ಯಾಲಯಗಳ ವಿಜ್ಞಾನಿಗಳು ಹುತ್ತದ ಅಣಬೆ ಜೀನ್‌ಗಳನ್ನು ಪ್ರತ್ಯೇಕಿಸಿ ಲ್ಯಾಬ್‌ನಲ್ಲಿ ಬೆಳೆಯಲು ಪ್ರಯತ್ನಿಸಿದ್ದಾರೆ. ಆದರೆ ಹುತ್ತದ ಅಣಬೆ ಮಾತ್ರ ಲ್ಯಾಬ್‌ನಲ್ಲಿ ಹುಟ್ಟಲಿಲ್ಲ. ಒಮ್ಮೆ ಈ ಹುತ್ತದ ಅಣಬೆಯ ಜೀನ್‌ಗಳನ್ನು ಅಭಿವೃದ್ಧಿಪಡಿಸಿ ಲ್ಯಾಬ್‌ನಲ್ಲಿ ಬೆಳೆಯಲು ಸಾಧ್ಯವಾಗಿದ್ದರೆ ಅಣಬೆಯ ರುಚಿ ತಿನ್ನುವವರಿಗೆಲ್ಲರಿಗೂ ಸಿಗುತ್ತಿತ್ತು.ಹುತ್ತದ ಅಣಬೆ ಹುಟ್ಟು ಕುತೂಹಲ. ಗೆದ್ದಲುಗಳ ಹುತ್ತದಲ್ಲಿ (ಫಂಗಲ್ ಗಾರ್ಡ್‌ನ್) ಶಿಲೀಂದ್ರ ತೋಟ ಇರುತ್ತವೆ. ಇದೇ ಫಂಗಲ್ ಗಾರ್ಡ್‌ನ್ ಹುತ್ತದ ಅಣಬೆಯ ಜನ್ಮಕ್ಕೆ ಕಾರಣೀಭೂತ. ಟರ್ಮೈಟೋಮೈಸಿಸ್ ಜಾತಿಯ ಶಿಲೀಂದ್ರ ಹುತ್ತದ ಅಣಬೆಯ ಜನ್ಮಕ್ಕೆ ಮೂಲ. ಇವು ಮಣ್ಣಿನಲ್ಲಿ ಬೆರೆತು, ನಿರ್ದಿಷ್ಟ ಹವಾಗುಣದಲ್ಲಿ ಅಣಬೆಯಾಗಿ ಹುಟ್ಟುತ್ತವೆ. ಮಳೆಗಾಲದಲ್ಲಿ ಮಾತ್ರ ಹುತ್ತದ ಅಣಬೆ ಏಳುವುದು.
ಸಾಮಾನ್ಯವಾಗಿ ಗುಂಪು ಗುಂಪಿನಲ್ಲಿ ೧೦ರಿಂದ ನೂರಾರು ಅಣಬೆಗಳು ಒಮ್ಮೆಲೇ ಜನಿಸುತ್ತವೆ. ಹುಟ್ಟಿದ ಒಂದರಿಂದ ಎರಡು ದಿನದ ಅವಧಿಯಲ್ಲೇ ಇವು ಕೊಳೆಯುತ್ತವೆ. ಆಗತಾನೇ ಹುಟ್ಟಿದ ಅಣಬೆಯ ಮೊಗ್ಗು, (ಅಂದರೆ, ಇನ್ನೂ ಅರಳದ) ಸಿಕ್ಕರೆ ಬಾಜಿ ಮಾಡಲು ತುಂಬಾ ಯೋಗ್ಯವಾದದ್ದು.
ಬೆಳಗಾವಿ, ಕುಮಟಾ, ಶಿರಸಿ, ಹಳಿಯಾಳ, ದಾಂಡೇಲಿ ಸೇರಿದಂತೆ ವಿವಿಧೆಡೆಮಳೆಗಾಲದಲ್ಲಿ ಸೀಸನಲ್ ಅಣಬೆ ಮಾರುಕಟ್ಟಯೇ ಇರುತ್ತದೆ. ಜನ ಈ ಅಣಬೆಯನ್ನು ಮುಗಿಬಿದ್ದು ಕೊಳ್ಳುವುದೂ ಇದೆ.
ಪಕ್ಕದ ಗೋವಾದಲ್ಲಿ ೧೯೮೪ರಲ್ಲೇ ವಾರ್ಷಿಕ ೫ ಲಕ್ಷ (ನೂರು ಅಣಬೆಗೆ ೫ ರುರಾಯಿ) ಮೌಲ್ಯದ ಅಣಬೆ ಮಾರಾಟವಾಗುತ್ತಿತ್ತು ಎಂಬ ಮಾಹಿತಿ ಇಂಟನ್‌ನೆಟ್‌ನಲ್ಲಿ ಲಭ್ಯವಿದೆ. ೨೦೦೪ರಲ್ಲಿ ೪೦ರಿಂದ ೫೦ ಅಣಬೆಗೆ ೧೫೦ ರು. ಬೆಲೆ ಇತ್ತು ಎಂದೂ ಇಂಟರ್‌ನೆಟ್ ಮಾಹಿತಿಗಳು ಹೇಳುತ್ತವೆ. ಅಲ್ಲಿ ಹುತ್ತದ ಅಣಬೆ ಮಾರಾಟ, ದಂಧೆ ಜೋರಾಗಿಯೇ ನಡೆದಿತ್ತು. ೧೯೯೩ರಲ್ಲಿ ಅಲ್ಲಿನ ಸರ್ಕಾರ ವನ್ಯ ಜೀವಿ ಧಾಮ ಪ್ರದೇಶದಲ್ಲಿ ಹುತ್ತದ ಅಣಬೆ ಕೀಳುವುದನ್ನು ನಿಷೇಧಿಸಿತ್ತು. ಬಳಿಕ ಈ ಕುರಿತು ಸಾಕಷ್ಟು ವಿವಾದವೂ ಆಗಿತ್ತು.
ಮೊದಲು ಅಣಬೆ ಹುಡುಕಲು ಕಾಡು, ಬೆಟ್ಟಕ್ಕೆ ಹೋದವರು ಬರಿ ಕೈಯಲ್ಲಿ ವಾಪಸ್ ಆಗುತ್ತಿರಲಿಲ್ಲವಂತೆ. ಕಂಬಳಿ, ಹಾಳೆ ತುಂಬಾ ಅಣಬೆ ತುಂಬಿಕೊಂಡೇ ಮನೆಗೆ ಬರುತ್ತಿದ್ದರು. ಗಣೇಶ ಚತುರ್ಥಿ ಆಸು ಪಾಸು ಹುತ್ತದ ಅಣಬೆ ಏಳುವುದು ಹೆಚ್ಚು. ಅಮಾವಾಸ್ಯೆ, ಹುಣ್ಣಿಮೆಯ ಹಿಂದು ಮುಂದಿನ ದಿನಗಳಲ್ಲೂ ಏಳುವುದಿದೆ. ಈ ಅವಧಿಯಲ್ಲಿ ಗಾಳಿ ಮಳೆ ಆದರೆ ಖಂಡಿತಾ ಹುತ್ತದ ಅಣಬೆ ತಲೆ ಎತ್ತುತ್ತವೆ ಎಂಬುದು ಅಣಬೆ ಕೀಳುವವರ ಸಾಮಾನ್ಯ ಜ್ಞಾನ.
ಗಣೇಶ ಚತುರ್ಥಿ ವೇಳೆಗೆ ಊರಿಗೆ ಹೋದಾಗ ಹುತ್ತದ ಅಣಬೆ ನೋಡುವ ಕುತೂಹಲದಿಂದ, ಮಧುನ ಜತೆಗೆ ನಾನು ಹೊಸಬೆಟ್ಟ ಸೇರಿದಂತೆ, ಸುತ್ತಲಿನ ಅರಣ್ಯಕ್ಕೆ ಹೋಗುತ್ತಿದ್ದೆ. ಹೀಗೆ ಹುತ್ತದ ಅಣಬೆ ನೋಡಲು ಹೋದಾಗ ೩ ಹುತ್ತದಲ್ಲಿ ಅಣಬೆ ಅರಳಿತ್ತು.

ಸಾಮಾನ್ಯವಾಗಿ ಗುಂಪು ಗುಂಪಿನಲ್ಲಿ ೧೦ರಿಂದ ನೂರಾರು ಅಣಬೆಗಳು ಒಮ್ಮೆಲೇ ಜನಿಸುತ್ತವೆ. ಹುಟ್ಟಿದ ಒಂದರಿಂದ ಎರಡು ದಿನದ ಅವಧಿಯಲ್ಲೇ ಇವು ಕೊಳೆಯುತ್ತವೆ. ಆಗತಾನೇ ಹುಟ್ಟಿದ ಅಣಬೆಯ ಮೊಗ್ಗು, (ಅಂದರೆ, ಇನ್ನೂ ಅರಳದ) ಸಿಕ್ಕರೆ ಬಾಜಿ ಮಾಡಲು ತುಂಬಾ ಯೋಗ್ಯವಾದದ್ದು.ಬೆಳಗಾವಿ, ಕುಮಟಾ, ಶಿರಸಿ, ಹಳಿಯಾಳ, ದಾಂಡೇಲಿ ಸೇರಿದಂತೆ ವಿವಿಧೆಡೆಮಳೆಗಾಲದಲ್ಲಿ ಸೀಸನಲ್ ಅಣಬೆ ಮಾರುಕಟ್ಟಯೇ ಇರುತ್ತದೆ. ಜನ ಈ ಅಣಬೆಯನ್ನು ಮುಗಿಬಿದ್ದು ಕೊಳ್ಳುವುದೂ ಇದೆ.
ಪಕ್ಕದ ಗೋವಾದಲ್ಲಿ ೧೯೮೪ರಲ್ಲೇ ವಾರ್ಷಿಕ ೫ ಲಕ್ಷ (ನೂರು ಅಣಬೆಗೆ ೫ ರುರಾಯಿ) ಮೌಲ್ಯದ ಅಣಬೆ ಮಾರಾಟವಾಗುತ್ತಿತ್ತು ಎಂಬ ಮಾಹಿತಿ ಇಂಟನ್‌ನೆಟ್‌ನಲ್ಲಿ ಲಭ್ಯವಿದೆ. ೨೦೦೪ರಲ್ಲಿ ೪೦ರಿಂದ ೫೦ ಅಣಬೆಗೆ ೧೫೦ ರು. ಬೆಲೆ ಇತ್ತು ಎಂದೂ ಇಂಟರ್‌ನೆಟ್ ಮಾಹಿತಿಗಳು ಹೇಳುತ್ತವೆ. ಅಲ್ಲಿ ಹುತ್ತದ ಅಣಬೆ ಮಾರಾಟ, ದಂಧೆ ಜೋರಾಗಿಯೇ ನಡೆದಿತ್ತು. ೧೯೯೩ರಲ್ಲಿ ಅಲ್ಲಿನ ಸರ್ಕಾರ ವನ್ಯ ಜೀವಿ ಧಾಮ ಪ್ರದೇಶದಲ್ಲಿ ಹುತ್ತದ ಅಣಬೆ ಕೀಳುವುದನ್ನು ನಿಷೇಧಿಸಿತ್ತು. ಬಳಿಕ ಈ ಕುರಿತು ಸಾಕಷ್ಟು ವಿವಾದವೂ ಆಗಿತ್ತು.
ಮೊದಲು ಅಣಬೆ ಹುಡುಕಲು ಕಾಡು, ಬೆಟ್ಟಕ್ಕೆ ಹೋದವರು ಬರಿ ಕೈಯಲ್ಲಿ ವಾಪಸ್ ಆಗುತ್ತಿರಲಿಲ್ಲವಂತೆ. ಕಂಬಳಿ, ಹಾಳೆ ತುಂಬಾ ಅಣಬೆ ತುಂಬಿಕೊಂಡೇ ಮನೆಗೆ ಬರುತ್ತಿದ್ದರು. ಗಣೇಶ ಚತುರ್ಥಿ ಆಸು ಪಾಸು ಹುತ್ತದ ಅಣಬೆ ಏಳುವುದು ಹೆಚ್ಚು. ಅಮಾವಾಸ್ಯೆ, ಹುಣ್ಣಿಮೆಯ ಹಿಂದು ಮುಂದಿನ ದಿನಗಳಲ್ಲೂ ಏಳುವುದಿದೆ. ಈ ಅವಧಿಯಲ್ಲಿ ಗಾಳಿ ಮಳೆ ಆದರೆ ಖಂಡಿತಾ ಹುತ್ತದ ಅಣಬೆ ತಲೆ ಎತ್ತುತ್ತವೆ ಎಂಬುದು ಅಣಬೆ ಕೀಳುವವರ ಸಾಮಾನ್ಯ ಜ್ಞಾನ.
ಗಣೇಶ ಚತುರ್ಥಿ ವೇಳೆಗೆ ಊರಿಗೆ ಹೋದಾಗ ಹುತ್ತದ ಅಣಬೆ ನೋಡುವ ಕುತೂಹಲದಿಂದ, ಮಧುನ ಜತೆಗೆ ನಾನು ಹೊಸಬೆಟ್ಟ ಸೇರಿದಂತೆ, ಸುತ್ತಲಿನ ಅರಣ್ಯಕ್ಕೆ ಹೋಗುತ್ತಿದ್ದೆ. ಹೀಗೆ ಹುತ್ತದ ಅಣಬೆ ನೋಡಲು ಹೋದಾಗ ೩ ಹುತ್ತದಲ್ಲಿ ಅಣಬೆ ಅರಳಿತ್ತು.

2 comments:
ಹೊಸ ವಿಷಯ ಕಲಿತಂತಾಯಿತು. ಹುತ್ತಿನ ಹಣಬೆಯ ಬಗ್ಗೆ ಚೆನ್ನಾಗಿ ಬರೆದಿದ್ದೀರಿ. ಅದರ ಚಿತ್ರಗಳು ಚೆನ್ನಾಗಿ ಬಂದಿವೆ.
ಗಜಾನನ,
ಅಣಬೆ ಕುರಿತು ಚೆನ್ನಾಗಿ ಬರೆದಿದ್ದೀಯ. ಮೊದಲ ಬಾರಿಗೆ ನಿನ್ನ ಬ್ಲಾಗ್ ನೋಡುತ್ತಿದ್ದೇನೆ.
Post a Comment